ಮ್ಯಾಂಗನೀಸ್
ಆವರ್ತ ಕೋಷ್ಟಕದ 7ನೆಯ ಪ್ರಧಾನ ಗುಂಪಿಗೆ ಸೇರಿದ ಲೋಹಧಾತು.  ಪ್ರತೀಕ ಒಟಿ.  ಪರಿಷ್ಕøತ ಆವರ್ತ ಕೋಷ್ಟಕದಲ್ಲಿ ಜ ಕ್ಷೇತ್ರದ ಮಧ್ಯವರ್ತಿ ಲೋಹಗಳು ಎನಿಸಿರುವ, 3ಜ ಶ್ರೇಣಿಯ ಧಾತುಗಳ ಪೈಕಿ ಒಂದು.  ಲ್ಯಾಟಿನ್ ಭಾಷೆಯ ಮ್ಯಾಗ್‍ನೆಸ್ ಎಂಬ ಶಬ್ದದಿಂದ ಈ ಹೆಸರು ಬಂದಿದೆ.  ಪರಮಾಣುಸಂಖ್ಯೆ 25; ಪರಮಾಣು ತೂಕ 54.938.  ನೈಸರ್ಗಿಕವಾಗಿ ಲಭಿಸುವ ಏಕೈಕ ಸಮಸ್ಥಾನಿ 51. ಅನೇಕ ಸಮಸ್ಥಾನಿಗಳ (50 ರಿಂದ 57) ಕೃತಕ ಸೃಷ್ಟಿ ಆಗಿದ್ದರೂ  ಅವು ಅಸ್ಥಿರ.  ಅರ್ಧಾಯು ಬಲು ಕಡಿಮೆ.  ಸಮಸ್ಥಾನಿ 54 ತಕ್ಕಮಟ್ಟಿಗೆ ದೀರ್ಘಾಯುವಿನದು; ಅರ್ಧಾಯು 310 ದಿವಸಗಳು. ಇದನ್ನೂ ಸಮಸ್ಥಾನಿ 56ನ್ನೂ ಪಥರೇಖಣಗಳಾಗಿ (ಟ್ರೇಸರ್ಸ್) ಬಳಸುತ್ತಾರೆ. ಮ್ಯಾಂಗನೀಸಿನ ಎಲೆಕ್ಟ್ರಾನ್ ವಿನ್ಯಾಸ [Ar]3d5482; ಪರಮಾಣುತ್ರಿಜ್ಯ 1.35 ;  ಸಹವೇಲೆಂಟ್ ತ್ರಿಜ್ಯ 1.17  ; ಅಯಾನಿಕ್ ತ್ರಿಜ್ಯ 0.83 (+2) ಮತ್ತು 0.46 (+7); ಆಯಾನೀಕರಣ ವಿಭವ (ಎಲೆಕ್ಟ್ರಾನ್ ವೋಲ್ಟುಗಳಲ್ಲಿ) ಪ್ರಥಮ 7.32, ದ್ವಿತೀಯ 15.7, ತೃತೀಯ 33.69, ಸಪ್ತಮ  119.24; ಸಾಂದ್ರತೆ 7.30 ಗ್ರಾಮ್/ಮಿಲಿ ; ದ್ರವನಬಿಂದು 1244 ( 30ಅ; ಕುದಿಬಿಂದು 19620ಅ; ವಿದ್ಯುತ್ ಸಂವಾಹಕತೆ  0.054 ಮೈಕ್ರೋಓಮ್ಸ್ -1; ಗ್ರಾಹ್ಯೋಷ್ಣ 0.115 ಕೆಲೊರಿ/ಗ್ರಾಮ್/ಸೆಂ.  ಮ್ಯಾಂಗನೀಸ್ ಧಾತು ಭಿನ್ನರೂಪಿ ಲಕ್ಷಣವುಳ್ಳದ್ದು.  ಮೂರು, ಇಲ್ಲವೆ ನಾಲ್ಕು ಭಿನ್ನ ರೂಪಗಳನ್ನು ವಿವಿಧ ಉಷ್ಣತಾಮಟ್ಟದಲ್ಲಿ ಪ್ರದರ್ಶಿಸುತ್ತದೆ.  ಸಾಮಾನ್ಯ ವಾತಾವರಣದಲ್ಲಿ ಭದ್ರ α ರೂಪದಲ್ಲೂ ಸುಮಾರು 7270 ( 30ಅ ಉಷ್ಣತೆಯ ಮಟ್ಟ ಮಿರಿದರೆ ( ರೂಪದಲ್ಲೂ 1079 ( 30ಅ ಉಷ್ಣತೆಯ ಮಟ್ಟ ಮೀರಿದಾಗ ( ರೂಪದಲ್ಲೂ ಅಲ್ಲಿಂದಾಚೆಗೆ 1140 ( 30ಅ ನಿಂದ ದ್ರವನಬಿಂದುವಿನವರೆಗೆ ( ರೂಪದಲ್ಲೂ ಇರುತ್ತದೆ.

	1774ರ ತನಕ ನಿಸರ್ಗಮೂಲದ ಮ್ಯಾಂಗನೀಸ್ ನಿಕ್ಷೇಪಗಳನ್ನು ಕಬ್ಬಿಣದ ಸಂಯುಕ್ತಗಳೆಂದೇ ಭಾವಿಸಲಾಗಿತ್ತು.  ಇದನ್ನೊಂದು ಹೊಸ ಧಾತು ಎಂದು ಗುರುತಿಸಿದವ (1774) ಸ್ವೀಡನ್ನಿನ ರಸಾಯನ ವಿಜ್ಞಾನಿ ಕಾರ್ಲ್ ವಿಲ್‍ಹೆಲ್ಮ್ ಷೀಲೆ (1742-86).  ಅದೇ ವರ್ಷ ಷೀಲೆಯ ಸಹಸಂಶೋಧಕ ಗಾನ್ ಎಂಬವ ಇದನ್ನು ಪ್ರತ್ಯೇಕಿಸಿದ. ನಿಸರ್ಗದಲ್ಲಿ ಅಧಿಕ ಪ್ರಮಾಣದಲ್ಲಿ ದೊರೆಯುವ ಧಾತುಗಳಲ್ಲಿ ಮ್ಯಾಂಗನೀಸ್ 12ನೆಯದು.  ಭೂಮಿಯ ಮೇಲ್ಮೈಯಲ್ಲಿ ತೂಕದ ಪ್ರಮಾಣ ಶೇಕಡಾ ಸುಮಾರು  0.1ರಷ್ಟು. ಭೂಮಿಯಲ್ಲಿ ಇದು ಬಲು ವ್ಯಾಪಕವಾಗಿ ಹರಡಿಕೊಂಡಿದೆ. ಸಾಗರಗಳ ನೀರಿನಲ್ಲಿಯೂ ಮ್ಯಾಂಗನೀಸ್ ಅಂಶ ಇದೆ.  ಕಡಲ ನೀರಿನಲ್ಲಿಯ ಅಧಿಕ ಪ್ರಮಾಣದ ಧಾತುಗಳ ಪೈಕಿ ಇದು 34ನೆಯದು.  ನಿಸರ್ಗದಲ್ಲಿ ಮ್ಯಾಂಗನೀಸ್ ವಿಶೇಷವಾಗಿ ಆಕ್ಸೈಡ್ ರೂಪದಲ್ಲಿ ದೊರಕುತ್ತದೆ. ಮ್ಯಾಂಗನೀಸಿನ ಅಂಶ ಶೇಕಡಾ 35ಕ್ಕಿಂತಲೂ ಹೆಚ್ಚಾಗಿದ್ದರೆ ಮಾತ್ರ ಅಂಥ ನಿಕ್ಷೇಪವನ್ನು ಮ್ಯಾಂಗನೀಸ್ ನಿಕ್ಷೇಪವೆಂದು ಪರಿಗಣಿಸುವುದಿದೆ.  ಲೋಹೋತ್ಪಾದನೆಯ ದರ್ಜೆಯ ನಿಕ್ಷೇಪಗಳು ಎನಿಸಿಕೊಳ್ಳುವಂಥ, ಮ್ಯಾಂಗನೀಸಿನ ಕನಿಷ್ಠ ಪ್ರಮಾಣಾಂಶ ಶೇಕಡಾ 48 ಇರುವ ಪ್ರಮುಖ ನಿಕ್ಷೇಪಗಳು ಈ ಮುಂದಿನಂತಿವೆ.

	  ಅದುರು		  ರಾಸಾಯನಿಕ ಸೂತ್ರ		   ಮ್ಯಾಂಗನೀಸ್ ಶೇಕಡಾವಾರು(ಸುಮಾರು)
	ಪೈರೊಲೂಸೈಟ್	   ...	  ಒಟಿಔ2 			...            63
	ಸಿಲೊಮಿಲಿನ್       ...    ಃಚಿಒಟಿಒಟಿ8ಔ16(ಔಊ)4	... 		45-60
	ಮ್ಯಾಂಗನೈಟ್       ...    ಒಟಿಔ3. ಊ2ಔ		       ... 		62
	ಹೌಸ್‍ಮನೈಟ್      ...    ಒಟಿಔ3			...		72
	ಬ್ರಾನೈಟ್          ...   3ಒಟಿ3ಔ3.ಒಟಿSiಔ3	       ... 		62
	ರ್ಹೋಡೊಕ್ರೊಸೈಟ್   ...     ಒಟಿಅಔ3			... 		47
	ರ್ಹೋಡೊನೈಟ್     ...     ಒಟಿSiಔ3		       ... 		42

	ಮ್ಯಾಂಗನೀಸ್ ನಿಕ್ಷೇಪಗಳು ಗಣನೀಯ ಪ್ರಮಾಣದಲ್ಲಿರುವ ರಾಷ್ಟ್ರಗಳೆಂದರೆ ರಷ್ಯ, ಗ್ಯಾಬನ್, ಆಫ್ರ್ರಿಕ, ಬ್ರಜಿಲ್, ಭಾರತ, ಚೀನ, ಘಾನ, ಮೊರಾಕೋ, ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿಯ ನಿಕ್ಷೇಪಗಳು ವ್ಯಾಪಕವಾದವಾದರೂ ಕೆಳ ದರ್ಜೆಯವು. ಕ್ಯೂಬ, ಮೆಕ್ಸಿಕೋ, ಈಜಿಪ್ಟ್, ಆಸ್ಟ್ರೇಲಿಯಾ, ತುರ್ಕಿ, ಮಧ್ಯ ಆಫ್ರಿಕ, ಪಶ್ಚಿಮ ಆಫ್ರಿಕ, ಪಶ್ಚಿಮ ಯೂರೋಪ್‍ಗಳಲ್ಲೂ ನಿಕ್ಷೇಪಗಳಿವೆ. ಪೆಸಿಫಿಕ್ ಸಾಗರದ ತಳದಲ್ಲಿ ಕಂಡುಬಂದಿರುವ ಮ್ಯಾಂಗನೀಸ್ ಗೆಡ್ಡೆಗಳನ್ನೂ ಭಾರೀ ನಿಕ್ಷೇಪಗಳು ಎನ್ನಲಾಗಿದೆ.

	ಮ್ಯಾಂಗನೀಸ್ ಅದುರುಗಳ ಉತ್ಪಾದನೆ ಮತ್ತು ರಫ್ತುಗಳಲ್ಲಿ ಭಾರತದ ಪಾತ್ರ ಹಿರಿದು.  ಇಲ್ಲಿಯ ಪ್ರಮುಖ ನಿಕ್ಷೇಪ ಕ್ಷೇತ್ರಗಳು ಎಂದರೆ ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ತಾನದಲ್ಲಿಯ ಭಂಡಾರ, ನಾಗಪುರ, ಚಿಂದ್ವಾರ, ಜಬುವ, ಪಂಚ್‍ಮಾಲ್ ಜಿಲ್ಲೆಗಳು;  ಆಂಧ್ರಪ್ರದೇಶ ಮತ್ತು ಒರಿಸ್ಸ ರಾಜ್ಯಗಳ ವಿಶಾಖಪಟ್ಟಣ, ಶ್ರೀಕಾಕುಲಮ್, ಗಂಜಾಮ್, ಕೋರಾಪುಟ, ಕಾಲಹಂಡಿ ಪ್ರದೇಶಗಳು; ಬಿಹಾರ ಮತ್ತು ಒರಿಸ್ಸದ ಸಿಂಗಭೂಮ್, ಬೊನಾಯ್ ಕೆಯಾಮಜ್ಹಾರ್ ಪ್ರದೇಶಗಳು;  ಕರ್ನಾಟಕದ ಶಿವಮೊಗ್ಗ, ಚಿತ್ರದುರ್ಗ, ತುಮಕೂರು, ಬಳ್ಳಾರಿ, (ಸಂಡೂರು), ಬೆಳಗಾವಿ ಮತ್ತು ಉತ್ತರಕನ್ನಡ ಜಿಲ್ಲೆಗಳು.  ಶಿವಮೊಗ್ಗ ಜಿಲ್ಲೆಯ ಶಂಕರ ಗುಡ್ಡ, ಕುಂಸಿ, ಶಿಕಾರಿಪುರ, ಚನ್ನಗಿರಿ ಮತ್ತು ಸಿದ್ದರಹಳ್ಳಿಯ ನಿಕ್ಷೇಪಗಳನ್ನು ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಹೆಚ್ಚಾಗಿ ಉಪಯೋಗಿಸುವರು.

	ಮ್ಯಾಂಗನೀಸ್ ನಿಕ್ಷೇಪಗಳಿಗೆ 1856ರ ತನಕ ಉಪಯೋಗ ಇರಲಿಲ್ಲ.  ಆ ವರ್ಷ ಬೆಸಿಮರ್ ವಿಧಾನದಿಂದ ಉಕ್ಕುತಯಾರಿಸುವ ಕಾರ್ಯಾಚರಣೆ ಪ್ರಾರಂಭವಾಯಿತು. ಪ್ರತಿಯೊಂದು ಟನ್ ಉಕ್ಕು ತಯಾರಿಕೆಗೆ ಸುಮಾರು 6.5 ಕೆಜಿಯಷ್ಟು ಮ್ಯಾಂಗನೀಸ್ ಬಳಕೆಯಾಯಿತು.  ಹೀಗಾಗಿ ಪ್ರಪಂಚಾದ್ಯಂತ ಉಕ್ಕು ತಯಾರಿಕೆಯಲ್ಲಿ ಮ್ಯಾಂಗನೀಸನ್ನು ಹೇರಳವಾಗಿ ಬಳಸುವುದು ಮೊದಲಾಯಿತು.

	1888ರಲ್ಲಿ ಹ್ಯಾಡ್‍ಫೀಲ್ಡ್ ಎಂಬವ ಮ್ಯಾಂಗನೀಸ್ ಮಿಶ್ರಿತ ನೂತನ ಬಗೆಯ ಉಕ್ಕನ್ನು ರೂಪಿಸಿದಂದಿನಿಂದ ಮ್ಯಾಂಗನೀಸಿನ ಪ್ರಾಮುಖ್ಯ ಮತ್ತಷ್ಟು ಹೆಚ್ಚಿತು.  ಶೇಕಡಾ ಸುಮಾರು 13ರಷ್ಟು ಮ್ಯಾಂಗನೀಸ್ ಮತ್ತು 1.25ರಷ್ಟು ಕಾರ್ಬನ್ ಹೊಂದಿರುವ ಉಕ್ಕು ಅದರ ಗಡಸುತನ, ಸವೆಯದಿರುವಿಕೆ, ಕಾಂತತ್ವರಹಿತತೆ ಮುಂತಾದವಕ್ಕೆ ಹೆಸರಾದುದು;  ಆದರೆ ತುಕ್ಕುನಿರೋಧಕ ಗುಣದ್ದಲ್ಲ.  ಉಕ್ಕಿನ ತಯಾರಿಕೆಯಲ್ಲಿ ಮ್ಯಾಂಗನೀಸನ್ನು ಫೆರೊಮ್ಯಾಂಗನೀಸ್ ಮತ್ತು ಸ್ವೀಜಲ್ ಐಸೆನ್ ಎಂದು ಎರಡು ಬಗೆಯ ಕಬ್ಬಿಣ ಮಿಶ್ರಲೋಹಗಳ ರೂಪದಲ್ಲಿ ಬಳಸುವುದಿದೆ.  ಫೆರೊಮ್ಯಾಂಗನೀಸ್‍ನಲ್ಲಿ ಶೇಕಡಾ 78-82 ಮ್ಯಾಂಗನೀಸ್, 12-16 ಕಬ್ಬಿಣ, 6-8 ಕಾರ್ಬನ್, 1 ಸಿಲಿಕಾನ್ ಇದೆ.  ಸ್ಟೀಜಲ್ ಐಸೆನ್‍ನಲ್ಲಿ ಶೇಕಡಾ 15-30 ಮ್ಯಾಂಗನೀಸ್, 6-5 ಕಾರ್ಬನ್, 1-3 ಸಿಲಿಕಾನ್, ಉಳಿದ ಅಂಶ ಕಬ್ಬಿಣ.  65-70% ಮ್ಯಾಂಗನೀಸ್ ಮತ್ತು 15-20 % ಸಿಲಿಕಾಂಶವಿರುವ ಸಿಲಿಕೊಮ್ಯಾಂಗನೀಸ್ ಆಕ್ಸೈಡ್, ಕಲ್ಲಿದ್ದಲು, ಬೆಣಚು ಕಲ್ಲು ಮತ್ತು ಕಬ್ಬಿಣದ ಚೂರುಪಾರುಗಳನ್ನು ವಿದ್ಯುತ್ ಕುಲುಮೆಯಲ್ಲಿ ಕರಗಿಸಿ ಎರಕ ಹುಯ್ಯುವುದರಿಂದ ಅಪೇಕ್ಷಿತ ಮಿಶ್ರಲೋಹವನ್ನು ಪಡೆಯಬಹುದು. ಈ ಮಿಶ್ರಲೋಹಗಳು ಉಕ್ಕಿನ ಉತ್ತಮ ಗುಣಗಳಿಗೆ ಮಾರಕಗಳೆನಿಸಿರುವ ಗಂಧಕ ಮತ್ತು ಆಕ್ಸಿಜನ್ನುಗಳನ್ನು ಹೊರಹಾಕುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ, ಎಂದೇ ಉಕ್ಕು ಕೈಗಾರಿಕೆಯಲ್ಲಿ ಮ್ಯಾಂಗನೀಸನ್ನು ಮಲಿನವಸ್ತುಗಳನ್ನು ಹೊರಹಾಕುವ ಜಾಡಮಾಲಿ ಎಂದು ಹೇಳುವುದುಂಟು.  ಶುದ್ಧ ರೂಪದ ಮ್ಯಾಂಗನೀಸ್ ಲೋಹಕ್ಕೆ ಅಂಥ ಹೇಳಿಕೊಳ್ಳುವ ಉಪಯೋಗವಾಗಲೀ ಪ್ರಾಮುಖ್ಯವಾಗಲೀ ಇಲ್ಲ.  ವಾಸ್ತವವಾಗಿ 1941ರ ತನಕವೂ ಕೈಗಾರಿಕಾ ಮೊತ್ತದಲ್ಲಿ ಶುದ್ಧ ರೂಪದ ಲೋಹದ ಉತ್ಪಾದನೆ ನಡೆದೇ ಇರಲಿಲ್ಲ. ಮ್ಯಾಂಗನೀಸ್ ಅಮೋನಿಯಮ್ ಸಲ್ಫೇಟಿನ ವಿದ್ಯುದ್ವಿಭಜನೆಯಿಂದ ಧಾತುವನ್ನು ಪಡೆಯಬಹುದು. ಆಕ್ಸೈಡನ್ನು ಸಿಲಿಕಾನ್ ಅಥವಾ ಅಲ್ಯೂಮಿನಿಯಮ್ ಲೋಹದಿಂದ ವಿದ್ಯುತ್ ಕುಲುಮೆಯಲ್ಲಿ ಅಪಕರ್ಷಿಸುವುದರಿಂದಲೂ ಮ್ಯಾಂಗನೀಸನ್ನು ಪಡೆಯಬಹುದು.

	ಮ್ಯಾಂಗನೀಸ್ ಒಂದು ಮಧ್ಯವರ್ತಿ ಲೋಹ;  ಅಂತೆಯೇ ವಿಶಿಷ್ಟ ಹಾಗೂ ಸಾಮಾನ್ಯಗುಣಗಳನ್ನೂ ಹೊಂದಿದೆ. ಬಲು ಮುಖ್ಯವಾಗಿ ಇದು ತನ್ನ ಸಂಯುಕ್ತಗಳಲ್ಲಿ ಅನೇಕ ಉತ್ಕರ್ಷಣ ಸ್ಥಿತಿಗಳನ್ನು ಪ್ರದರ್ಶಿಸುತ್ತದೆ. ಇದರಲ್ಲಿ ಸಾಮಾನ್ಯವಾಗಿ -3 ರಿಂದ ಪರಮಾವಧಿ +7ರ ವರೆಗಿನ ಎಲ್ಲ ಉತ್ಕರ್ಷಣಸ್ಥಿತಿಗಳೂ ಕಂಡುಬಂದಿವೆ.  ಅವುಗಳ ಪೈಕಿ +2 ಮತ್ತು +7 ಸ್ಥಿತಿಗಳು ಸುಪರಿಚಿತ.  ಸಾಮಾನ್ಯ ಮ್ಯಾಂಗನೀಸ್ ಸಂಯುಕ್ತಗಳಲ್ಲೆಲ್ಲ ಇದು ವೇದ್ಯ.  ಮ್ಯಾಂಗನೀಸ್ ಡೈ ಆಕ್ಸೈಡಿನಲ್ಲಿ ಉತ್ಕರ್ಷಣಸ್ಥಿತಿ +4.  ಒಟಿ (II) ಮತ್ತು ಒಟಿ (ಗಿII) ಅಯಾನುಗಳು ತಿಳಿಗೆಂಪು ಇಲ್ಲವೆ ಕಡುಗೆಂಪು.  ಇದು ಮಧ್ಯವರ್ತಿ ಲೋಹವಾದ್ದರಿಂದ ವಿವಿಧ ಬಣ್ಣಗಳ ಅಯಾನುಗಳು ಕಂಡುಬರುವುದು ಸಹಜವೇ.  ರಾಸಾಯನಿಕವಾಗಿ ಕ್ರಿಯಾಶೀಲ ಧಾತು, ಆಕ್ಸಿಜನ್, ನೀರು, ಸಾರೀಕೃತ ದ್ರಾವಣಗಳು, ಗಂಧಕ ಸಿಲಿಕಾನ್, ಕಾರ್ಬನ್, ನೈಟ್ರೋಜನ್, ಫಾಸ್ಫರಸ್, ಬೋರಾನ್, ವೆನೇಡಿಯಮ್ ಮುಂತಾದವುಗಳೊಂದಿಗೆ ವಾತಾವರಣದ ಸಾಮಾನ್ಯ ಉಷ್ಣತೆಯ ಮಟ್ಟದಲ್ಲಿ ಕ್ರಿಯೆಗೆ ಈಡಾಗುತ್ತದೆ.  ಕಾಸಿದಾಗಲಂತೂ ಕ್ರಿಯೆಗೆ ಒಳಗಾಗುವುದು ಖಚಿತ.  ಜೀವರಸಾಯನ ವಿಜ್ಞಾನದ ಸಂಶೋಧನೆಗಳಲ್ಲಿ ಒಟಿ+ ಅಯಾನ್ ತನ್ನ ವಿಶಿಷ್ಟ ಕಾಂತತ್ವ, ಎಲೆಕ್ಟ್ರಾನ್ ಗಿರಕಿ, ಅನುರಣನ, ನ್ಯೂಕ್ಲಿಯರ್ ಕಾಂತೀಯ ಮತ್ತು ಬೀಜ ಅಯಸ್ಕಾಂತೀಯ ಅನುರಣನ ಲಕ್ಷಣಗಳಿಂದಾಗಿ ಬಲು ಉಪಯುಕ್ತವೆನಿಸಿದೆ.  ಕಿಣ್ವಗಳಲ್ಲಿ ಸತುವು ಮತ್ತು ಮೆಗ್ನೀಸಿಯಮ್ಮಿನ ಸ್ಥಾನವನ್ನು ಮ್ಯಾಂಗನೀಸ್ ಆಕ್ರಮಿಸುವಂತಾಗಿ ಫಲಿತ ಸಂಯುಕ್ತಗಳ ಮೇಲೆ ಸಂಶೋಧನೆ ನಡೆಸುವುದು ವಾಡಿಕೆ.  ಜೀವಿಗಳಿಗೆ ಮ್ಯಾಂಗನೀಸ್ ಒಂದು ಅತ್ಯವಶ್ಯ ಲೋಹ.  ಪ್ರಾಣಿಗಳಲ್ಲಿ ಸಂತಾನೋತ್ಪತ್ತಿಗೆ ಅತ್ಯಗತ್ಯ. ಗಿಡಮರಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗುವ ಕಾಯಿಲೆಗೆ ಮ್ಯಾಂಗನೀಸ್ ಕೊರತೆ ಕಾರಣ.  ದ್ಯುತಿಸಂಶ್ಲೇಷಣೆಗೆ ಮ್ಯಾಂಗನಿಸ್ ಅವಶ್ಯ.  ಆರೋಗ್ಯವಂತನಾದವನಿಗೆ ದಿನಕ್ಕೆ 4 ಮಿಲಿಗ್ರಾಮಿನಷ್ಟು ಮ್ಯಾಂಗನೀಸಿನ ಅಗತ್ಯ ಇದೆ.  ಕಾಫಿ, ಚಹ ಸೇವನೆಯೇ ಆ ಪೂರೈಕೆಗೆ ಸಾಕು.  ಮ್ಯಾಂಗನೀಸ್ ಲೋಹಾಂಶ ಅಥವಾ ದೂಳು ಸೇವನೆಯಿಂದ ಆರೋಗ್ಯಕ್ಕೆ ಅಪಾಯ ತಟ್ಟುತ್ತದೆ.  ಇದರಿಂದ ಕೈಗಾರಿಕೆಗಳಲ್ಲಿ ಯುಕ್ತ ರಕ್ಷಣಾ ಕ್ರಮ ಕೈಗೊಂಡಿರುತ್ತಾರೆ.  

	ವಿಶ್ಲೇಷಣೆ : ಒಟಿ IIನ್ನು ಅಲ್ಪ ಪ್ರಮಾಣದಲ್ಲೂ ಕ್ಷಿಪ್ರವಾಗಿ ಗುರುತಿಸುವುದರಲ್ಲಿ ಬೆಂಜಿóಡಿನ್‍ನೊಡನೆ ಪ್ರತಿಕ್ರಿಯೆಯಿಂದಾಗಿ ಫಲಿಸುವ ನೀಲಿ ಬಣ್ಣವೇ ನಿರ್ಣಯಕಾರಿ.  ಸೀಸದ ಡೈಆಕ್ಸೈಡ್ ಮತ್ತು ಸಾರ ನೈಟ್ರಿಕ್ ಆಮ್ಲಗಳೊಡನೆ ಕಾಸಿದಾಗ ಉಂಟಾಗುವ ಕಡುಗೆಂಪು ಬಣ್ಣ ಮ್ಯಾಂಗನಿಸ್ ಇರವಿನ ಸೂಚಿ.  ಕ್ಷೇತ್ರ ಪ್ರಯೋಗಗಳಲ್ಲಿ ಮ್ಯಾಂಗನೀಸನ್ನು ಗುರುತಿಸಲು ಬಳಸುವ ಸುಲಭ ವಿಧಾನದಲ್ಲಿ ಒಂದು ಹನಿ ದ್ರಾವಣವನ್ನು 8-ಹೈಡ್ರಾಕ್ಸೈಡ್ ಕ್ವಿನೊಲಿನ್‍ನಿಂದ ಸಿಂಪಡಿಸಿದಂಥ ಸೂಸು ಕಾಗದದ ಚೂರಿನ ಮೇಲೆ ಹಾಕಿ, ಅಮೋನಿಯ ಅನಿಲಕ್ಕೆ ಹಿಡಿದರೆ ಕಾಗದ ಕಂದು ಬಣ್ಣಕ್ಕೆ ತಿರುಗುತ್ತದೆ.  ಅಮೋನಿಯ ಮಾಧ್ಯಮದಲ್ಲಿ ಹೈಡ್ರೋಜನ್ ಸಲ್ಫೈಡನ್ನು ಹಾಯಿಸಿದಾಗ ಮ್ಯಾಂಗನೀಸ್ ಇದ್ದರೆ ಅದು ಮಾಂಸ ವರ್ಣದಂತಿರುವ ಸಲ್ಫೈಡ್ ಆಗಿ ಹೊರಬೀಳುತ್ತದೆ. ಅವಶೇಷವನ್ನು ಶೋಧಿಸಿ ಪ್ರತ್ಯೇಕಿಸಿ, ಚೆನ್ನಾಗಿ ತೊಳೆದು ಒಣಗಿಸಿ ತೂಕಮಾಡಿ ಮ್ಯಾಂಗನೀಸ್ ಪ್ರಮಾಣವನ್ನು ನಿರ್ಧರಿಸುತ್ತಾರೆ.

	ಉಪಯೋಗಗಳು : ಮ್ಯಾಂಗನೀಸಿನ ಬಳಕೆ ಉಕ್ಕಿನ ಕೈಗಾರಿಕೆಗೆ ಸಿಂಹಪಾಲು.  ತುಕ್ಕು ನಿರೋಧಕ ಸ್ಟೈನ್‍ಲೆಸ್ ಸ್ಟೀಲ್ ತಯಾರಿಕೆಯಲ್ಲಿ ನಿಕ್ಕಲ್ ಬದಲು ಮ್ಯಾಂಗನೀಸ್ ಸೇರಿಸುವುದಿದೆ.  ಮೆಗ್ನೀಸಿಯಮ್ ಮತ್ತು ಅಲ್ಯೂಮಿನಿಯಮ್ ಹಗುರ  ಮಿಶ್ರಲೋಹಗಳಲ್ಲೆಲ್ಲ ಮ್ಯಾಂಗನೀಸ್ ಅಂಶ ಸ್ವಲ್ಪ ಮಟ್ಟಿಗೆ ಇದ್ದೇ ಇರುತ್ತದೆ. ಮ್ಯಾಂಗನೀಸ್ ಕಂಚು ಗಡಸು ಮತ್ತು ಧಾಷ್ಟ್ರ್ಯಕ್ಕೆ ಹೆಸರಾದ್ದು.  ರಾಸಾಯನಿಕ ಉಪಯೋಗಗಳು ಎಂದರೆ ಮುಖ್ಯವಾಗಿ ಶುಷ್ಕ ವಿದ್ಯುತ್‍ಕೋಶಗಳ (ಡ್ರೈ ಸೆಲ್‍ಗಳು) ತಯಾರಿಕೆಯಲ್ಲಿ ಶುದ್ಧ ಮ್ಯಾಂಗನೀಸ್ ಡೈ ಆಕ್ಸೈಡಿನ ಬಳಕೆ.  ಗಾಜಿನ ತಯಾರಿಕೆಯಲ್ಲಿ ಕಬ್ಬಿಣ (II) ಅಂಶದಿಂದ ಉಂಟಾಗುವ ಅನಪೇಕ್ಷಿತ ಹಸುರು ಬಣ್ಣವನ್ನು ಹೋಗಲಾಡಿಸಲು ಉತ್ಕರ್ಷಣಕಾರಿ ಮ್ಯಾಂಗನೀಸ್ ಡೈ ಆಕ್ಸೈಡ್ ಪ್ರಭಾವಶಾಲಿ.  ಪರಿಚಿತ ಉಪಯುಕ್ತ ಸಂಯಕ್ತ ಎಂದರೆ ಪೊಟ್ಯಾಸಿಯಮ್ ಪರಮ್ಯಾಂಗನೇಟ್.  ಇದು ಉತ್ತಮ ಉತ್ಕರ್ಷಣಕಾರಿ, ಕ್ರಿಮಿನಾಶಕ ಮತ್ತು ದುರ್ಗಂಧ ಮತ್ತು ಬಣ್ಣಗಳನ್ನು ಹೋಗಲಾಡಿಸುವುದರಲ್ಲಿ ಬಲು ಪರಿಣಾಮಕಾರಿ.  ಮ್ಯಾಂಗನೀಸ್ ಸಲ್ಫೇಟನ್ನು ವ್ಯವಸಾಯದಲ್ಲಿ ಕೃತಕ ಗೊಬ್ಬರದ ಅಂಶವಾಗಿಯೂ ನ್ಯಾಫ್ತಿನೇಟನ್ನು ಬಣ್ಣಗಳ ತಯಾರಿಕೆಯಲ್ಲೂ ಉಪಯೋಗಿಸುವರು.  ಬೆಂಕಿಪೊಟ್ಟಣ, ಪಟಾಕಿ, ಸಿಡಿಮದ್ದುಗಳ ತಯಾರಿಕೆ, ಚರ್ಮ ಹದಮಾಡುವಿಕೆ ಇವೇ ಮುಂತಾದ ಕೈಗಾರಿಕೆಗಳಲ್ಲೂ ಮ್ಯಾಂಗನೀಸ್ ಬಲು ಉಪಯುಕ್ತ.
(ಎಚ್.ಎಸ್.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ